Friday, July 15, 2011

ಸಖೀಗೀತ

ಸಖೀ...
ನಾನು ನಿರೀಕ್ಷಿಸುತ್ತಿದ್ದೇನೆ
ನಮ್ಮಿಬ್ಬರ ಮಿಲನವನ್ನು
ಹನಿ ಪ್ರೀತಿಗೂ ಬರಗೆಟ್ಟವನಂತೆ
ಕಾಯುತ್ತಿದ್ದೇನೆ ನಿನ್ನ ಬರವನ್ನು....

ವಿರಹದ ಉರಿಗೆ ಮನಸು ಕಲ್ಲಾಗಿಸಿ
ನಮ್ಮ ಪ್ರೀತಿಗೆ ಕವಚ ತೊಡಿಸಿ
ಕಾಯುತ್ತಿದ್ದೇನೆ ನಾನು
ಶಾಪಗ್ರಸ್ಥ ಅಹಲ್ಯೆಯಂತೆ....

ನಿನ್ನೊಂದಿಗೆ ಕಳೆದಿರುವ ಕ್ಷಣಗಳ
ಸವಿನೆನಪುಗಳಲಿ ಲೀನವಾಗಿ
ಕಾಯುತ್ತಿದ್ದೇನೆ ನಾನು
ಅಶೋಕವನದ ಸೀತೆಯಂತೆ....

ಕಾಲಚಕ್ರದಡಿ ಹಣ್ಣಾಗಿ
ನನ್ನತನ ಕ್ಷಣ-ಕ್ಷಣವೂ ಕರಗಿಹೋಗಿ
ಹೃನ್ಮಗಳಲಿ ನಿನ್ನನ್ನೇ ಹೊತ್ತು
ಕಾಯುತ್ತಿದ್ದೇನೆ ನಾನು ಶಬರಿಯಂತೆ....

ಸಖೀ....
ನಿನ್ನನ್ನು ನನ್ನೊಳಗೇ ಅವಿತಿಟ್ಟುಕೊಂಡು
ಕಳೆದುಹೋಗಿರುವ ನನ್ನನು
ನಿನ್ನ ಕಣ್ಣಾಲಿಗಳಲಿ ಕಾಣಲು
ನಾನು ಕಾಯುತ್ತಿದ್ದೇನೆ ನಿನಗಾಗಿ....

3 comments:

  1. `ನಿನ್ನನ್ನು ನನ್ನೊಳಗೇ ಅವಿತಿಟ್ಟುಕೊಂಡು
    ಕಳೆದುಹೋಗಿರುವ ನನ್ನನು ' ಉತ್ತಮಸಾಲುಗಳ, ಹಾಗೂ ಸೂಕ್ತ ಉಪಮೆಗಳ ಸು೦ದರ ಕವನ.ಅಭಿನ೦ದನೆಗಳು. ನನ್ನ ಬ್ಲಾಗ್ ಗೆ ಒಮ್ಮೆ ಭೇಟಿ ಕೊಡಿ.

    ReplyDelete
  2. ಸಖೀಗೀತ : ಸುಖೀಗೀತ ! ಚೆನ್ನಾಗಿದೆ.

    ReplyDelete
  3. ಒಲವಿನ ಕರೆ ಅಂದ್ರೆ ಹೀಗಿರಬೇಕು. ಕರಗಿ ಬಿಡುವುದು ಎಂಥಾ ಹಿಮಗಿರಿಯೂ!

    ReplyDelete