Thursday, February 24, 2011

ಪ್ರೀತಿ

ಎನ್ನ ಮನದಾಳದಿ

ಪ್ರೇಮ ಬೀಜವನೆರಚಿ
ಮರೆಯಾಗಿ ಹೋದೆ ನೀನು
ಮೊಳಕೆಯೊಡೆಯುತಿದೆ ಪ್ರೀತಿ
ಅಂತರಂಗವ ಚಾಚಿ...
ಮತ್ತೆ ಮೂಡಿದೆ ಮೂಡಣದಿ
ಪ್ರೇಮ ರಶ್ಮಿಯ ರಂಗು
ಬಾನಿನ ಅಗಲಕೆ ತೆರೆದಿದೆ
ಎನ್ನ ಹೃದಯಾ
ಮನವು ಬಯಸುತಿದೆ
ರಂಗುರಂಗಿನ ಕಾಮನಬಿಲ್ಲು
ಹೃದಯ ಬಡಿತವು ಹಾಡಿದೆ
ಪ್ರೇಮಗೀತೆಯನು ಇಂದು
ಬಾ ಗೆಳತಿ ಬೇಗ
ಒಂದಾಗು ಎನ್ನ ಸ್ವರದೀ......


ನಿನ್ನ ಹನಿ ಪ್ರೀತಿ...
ಮುತ್ತಾಗಿ ಅರಳಿದೆ
ಎನ್ನ ಎದೆ ಚಿಪ್ಪಿನೊಳಗೆ
ಎದೆ ಬಡಿತದೊಡಗೂಡಿ
ಪ್ರೇಮ ರಾಗವ ಹಾಡಿ
ತಂತುಗಳ ಮೀಟುತಿದೆ
ಪ್ರೇಮ ರಾಗವ ಹಾಡುತಿದೆ
ಗೆಳತೀ......

Monday, February 14, 2011

ಓ ಎನ್ನ ಪ್ರೀತಿ

ಓ ಎನ್ನ ಪ್ರೀತಿ

ನಾನು ಹೇಳಲಾರೆ ನಿನಗೆ
ನನ್ನೆದೆಯಾಳದ ಭಾವನೆ...

ನಾನು ಹೇಳಲಾರೆ...
ನಾನು ನಿನಗಾಗಿ, ನೀನು ನನಗಾಗಿ
ನಿನಗಾಗಿ ನನ್ನ ಪ್ರಾಣ
ಕೊಡುವೆ ಎಂದೂ ಹೇಳಲಾರೆ

ನೀನಿಲ್ಲದೇ ಈ ಜಗವೆಲ್ಲ
ಶೂನ್ಯವೆಂದೂ ನಾ ಹೇಳಲಾರೆ
ಬದುಕಿದರೂ ನಿನಗಾಗಿ ಸತ್ತರೂ ನಿನಗಾಗಿ
ಎನ್ನುತ ನನ್ನ ಸಾವಿಗೆ ನಿನ್ನ ಹೆಸರಿಡಲಾರೆ

ಇವೆಲ್ಲವೂ ನನ್ನ ಮಾತುಗಳಲ್ಲ
ಈ ಜಗದಿ ತಲತಲಾಂತರಿಂದ
ನಿವೇದಿಸಿಕೊಂಡ ಪ್ರೇಮದ
ಕನವರಿಕೆಗಳು

ನನ್ನ ಪ್ರೇಮ ನಿವೇದನೆಯು ಇಷ್ಟೇ
ನನ್ನದೊಂದು ಪುಟ್ಟ ಹೃದಯವಿದೆ
ಅದರಲ್ಲಿ ನೀನು ಬಂದು ನೆಲೆಸು
ನನ್ನ ಇರುವಿಕೆಯ ಹೃದಯಬಡಿತವಾಗಿ......

Friday, February 11, 2011

ಅವಳಿಲ್ಲದಿದ್ದರೆ…

ಅವಳಿಲ್ಲದಿದ್ದರೆ…

“ನಾನೂ ಇಲ್ಲ”ವೆಂದಿತು ಹೃದಯ
ಮಾತು
ಮುಗಿಯುವ ಮೊದಲೇ…
ಮನಸಂತೂ ಖಾಲಿಯಾಗಿತ್ತು
ಪಾತ್ರೆಯ ಕೊನೆಯ ಹನಿ ನೀರೂ
ಧರೆಗುರಿಳಿದಂತೆ


ಅವಳು ಹೊರಡುವ
ಸುದ್ದಿಯನು ಕೇಳಿ
ಏನೋ ಯಾತನೆ
ಹೃದಯದಲ್ಲೋ….
ಮನಸಿನಲ್ಲೋ…. ಗೊತ್ತಾಗದು


ಪ್ರೇಮ ತರಂಗಗಳು
ತಟಸ್ಥವಾದವು
ಸಂಗೀತವನು ನಿಲ್ಲಿಸಿ
ದೂರದಿಂಲೇನೋ ಎನ್ನುವಂತಹ
ಕ್ಷೀಣವಾದ ಹೃದಯಬಡಿತ


ಕೈಕಾಲುಗಳು
ಚಲನೆಯನ್ನೇ ಮರೆತಿದ್ದವು
ಮುಗುಳ್ನಗು
ಹಾಗೆಂದರೇನು ಎಂದಿತು
ನನ್ನ ಮುಖಾರವಿಂದ


ಅವಳಿಲ್ಲದಿದ್ದರೇ…
ನಾನೂ ಹೊರಟೆ
ಅಂತರಂಗದಲಿ ನುಡಿಯಿತು
ಎನ್ನ ಆತ್ಮ……

Sunday, February 6, 2011

ಕಾವ್ಯ ಕನ್ನಿಕೆ



ಅವಳು, ಅವಳೆನಗೆ
ಜೀವಂತ ಕವಿತೆ
ನನ್ನ ಬಾಳಿನ ಜೀವಂತಿಕೆ
ಅವಳೊಂದು ಜೀವಂತ ಕವನ



ಸುತ್ತ ಸುಳಿಯು ತಂಗಾಳಿಗೆ
ಅತ್ತಿತ್ತ ಹಾರುವ
ಅವಳ ಮುಂಗುರುಳು
ಅವಳೊಂದು ಜೀವಂತ ಕವನ



ಜಗದ ಎಲ್ಲವನ್ನೂ
ಅಚ್ಚರಿಯಿಂದ ನೋಡುವ
ಅವಳ ಆ ಕಣ್ಣುಗಳು
ಅವಳೊಂದು ಜೀವಂತ ಕವನ



ಎನ್ನ ಹೃದಯಕ್ಕೆ
ತಂಪನ್ನೀಯುವ
ಅವಳ ಮಂದಹಾಸ
ಅವಳೊಂದು ಜೀವಂತ ಕವನ



ಸೃಷ್ಟಿಯ ಸೌಂದರ್ಯವನ್ನೇ
ಹೊತ್ತು ತಿರುಗುವ
ಅವಳ ಸುಂದರ ಮೈಮಾಟ
ಅವಳೊಂದು ಜೀವಂತ ಕವನ



ಒಂದಿನಿತೂ ಬೇಸರಿಸದಂತೆ
ಎಲ್ಲವನ್ನೂ ಚುರುಕಾಗಿ ಮಾಡುವ
ಅವಳ ಚಲನ-ವಲನ
ಅವಳೊಂದು ಜೀವಂತ ಕವನ



ಅತ್ತಿಂದಿತ್ತ ಓಡಾಡುವಾಗ
ಬೆನ್ನ ಹಿಂದೆ ಓಲಾಡುವ
ಅವಳ ಹೆರಳು
ಅವಳೊಂದು ಜೀವಂತ ಕವನ



ಸುತ್ತ ಸುಳಿಯುವ
ತಂಗಾಳಿಯಂತೆ ಮುದನೀಡುವ
ಅವಳ ಒಯ್ಯಾರ
ಅವಳೊಂದು ಜೀವಂತ ಕವನ