Sunday, June 11, 2017

ಬಿಂಬ

ಅಪರಿಚಿತರನ್ನು
ಹುಡುಕಬೇಕಿದೆ ಈಗ
ಪೂರ್ವಾಪರಗಳನ್ನು
ಅರಿಯದೇ
ಎನ್ನ ಪ್ರತಿಬಿಂಬವನು
ಇದ್ದದ್ದು ಇದ್ದ ಹಾಗೆ
ಬಿಡಿಸುವಾ
ಅನಾಮಧೇಯರನ್ನು
ಹುಡುಕಬೇಕಿದೆ

ನಾಲ್ಕಾರು
ಮಾತುಗಳಾಡಿ
ಎನ್ನ ತುಮುಲ, ತರಲೆ
ತೆವಲು, ತಳಮಳಗಳ
ಮಳೆಯನ್ನು ಸುರಿಸಿ
ಎಲ್ಲಿಯೋ
ಅವಿತಿರುವ ಎನ್ನ
ನಿಜರೂಪವ ತೋರಿ
ಬಿಂಬವ ಬಿಡಿಸಲು
ಕೋರಬೇಕಿದೆ

ಬಲ್ಲವರು, ಪರಿಚಿತರು
ತಮಗೆ ಗೊತ್ತಿರುವಂತೆ
ಗೊತ್ತಿರಬಹುದೆಂಬ ಭಾವಗಳ
ಪೂರ್ವಾಗ್ರಹ ಪೀಡಿತ
ಬಣ್ಣ ಬಳಿದು
ಅವರಿಗಿಷ್ಟವಾದಂತೆ
ಎನ್ನ ಬಿಂಬವನು ಬಿಡಿಸಿ
ಮೂಲ ಬಣ್ಣವನ್ನೇ
ಮರೆಮಾಚಿದ್ದಾರೆ
ಅವರಿವರು ಬಿಡಿಸಿರುವ
ಚಿತ್ರದಲಿ
ನನ್ನ ನಾನೇ ಹುಡುಕಬೇಕಿದೆ

ಬಿಂಬ

ಅಪರಿಚಿತರನ್ನು ಹುಡುಕಬೇಕಿದೆ ಈಗ ಪೂರ್ವಾಪರಗಳನ್ನು ಅರಿಯದೇ ಎನ್ನ ಪ್ರತಿಬಿಂಬವನು ಇದ್ದದ್ದು ಇದ್ದ ಹಾಗೆ ಬಿಡಿಸುವಾ ಅನಾಮಧೇಯರನ್ನು ಹುಡುಕಬೇಕಿದೆ ನಾಲ್ಕಾರು ಮಾತ...