Saturday, December 11, 2010

ಮೊಗ್ಗು ಅರಳುವ ಮುನ್ನ

ಮಲ್ಲಿಗೆಯ ಮೊಗ್ಗಿನ

ಗೇಣುದ್ದದ ಮಾಲೆ
ಪೂರ್ಣ ಚಂದಿರನಂತೆ
ಅರಳುವುದು ಅವಳ ಮುಖ

ಒಂದು ಸಂಪಿಗೆಯ ಹೂ
ಕಾಣುವುದೇ ತಡ
ಲವಲವಿಕೆ ಮುಖದಲ್ಲಿ
ಪ್ರೇಮಧಾರೆಯು ಮನದಲ್ಲಿ


ಕೆಂಗುಲಾಬಿಯ ಕೊಡಲು
ನಾಚಿ ಕೆಂಪಾಯಿತು
ಅವಳ ಮುಖ
ಹೂವು ಅರಳಿತು ಆಗ


ಕೇದಗೆ, ಸೇವಂತಿಗೆ, ಜಾಜಿ
ಹೂವು ಯಾವುದಾದರೇನು
ಅರಳುವುದು ಪ್ರೇಯಸಿಯ
ಹೃದಯದಲಿ

ಅರಳುವುದು ಹೃದಯ

ಹರಿಯುವುದು ಪ್ರೇಮಧಾರೆ
ಕಣ್ಣುಗಳು ಬರೆಯುವವು
ಪ್ರೇಮಕಾವ್ಯ

No comments:

Post a Comment