Monday, December 27, 2010

ಕಾಮನೆಗಳ ಸುಳಿಯಲ್ಲಿ

ದಪ್ಪ ಜಡೆ
ಸಣ್ಣ ನಡು
ಬಳುಕುವ ಸೊಂಟ
ಕಂಡೊಡನೆ
ಮನದಲ್ಲಿ ಕಾಮನೆಗಳು
ಭುಗಿಲೇಳುತ್ತವೆ.

ವಯ್ಯಾರಿಯ
ಕುಡಿನೋಟಕೆ
ತುಂಟ ನಗುವಿಗೆ
ಬಿಂಕದ ಮಾತುಗಳಿಗೆ
ಮನಸು
ಹಪಹಪಿಸುತ್ತದೆ

ಜೀವನದಲ್ಲಿ
ಹಲವು ವಸಂತಗಳು
ಕಳೆದರೂ
ಮನದಲ್ಲಿ ತಲ್ಲಣ
ಕಾಮನೆಗಳ
ಕೋಲಾಹಲ

ಅಂತರಂಗದ

ಕಾಮನೆಗಳನ್ನೆಲ್ಲಾ ಕರಗಿಸಿ
ಕಾಲ್ಮರಿಗೆಯಾಗಿ ಧರಿಸಿ
ಜೀವನವನ್ನು
ಮೆಟ್ಟಿ ನಿಲ್ಲುವ ಗಟ್ಟಿತನ
ಎಂದು ಬರುವುದೋ
ಯಾರಿಗೆ ಗೊತ್ತು !!!!

No comments:

Post a Comment