Wednesday, September 14, 2011

ಅಕ್ಷರಮಾಲೆ

ಅಕ್ಷರಗಳ ನಾನೂ ಕಲಿತೆ

ಎಲ್ಲರೂ ಕಲಿತರು

ಅವರು ಅಕ್ಷರಗಳ ಪೋಣಿಸಿ
ಮಾತಿನ ಮಾಲೆ ಕಟ್ಟಿದರು
ಮಾತಿಗೆ ಮಾತು ಬೆಳೆಸುತ್ತಾ
ಜನರನೆಲ್ಲ ಮರುಳು ಮಾಡಿದರು...

ಇವರು ಅಕ್ಷರಗಳನು
ಹೂದೋಟದಲಿ ಬಿತ್ತಿದರು
ದುಂಬಿಯ ರೆಕ್ಕೆಗೆ, ಜಿಹ್ವೆಗೆ ಕಟ್ಟಿ
ಸವಿಜೇನ ಹರಿಸಿದರು...

ಮತ್ತೊಬ್ಬರು ಅಕ್ಷರಗಳಿಗೆ
ಭಾವನೆಗಳ ಬಟ್ಟೆ ತೊಡಿಸಿದರು
ಪದಗಳನೆಲ್ಲ ಮುತ್ತುಗಳಂತೆ ಪೋಣಿಸಿ
ಪದವನ್ನು ಕಟ್ಟಿದರು...

ಅವರು ಅಕ್ಷರಗಳಿಗೆ
ಬದುಕಿನ ಬಣ್ಣ ನೀಡಿದರು
ಅನುಭವಾಮೃತ ಸಾರವನು ಹರಿಸಿ
ಸಾಹಿತ್ಯ ರಸವನು ಉಣಬಡಿಸಿದರು...


ಅಕ್ಷರವನು ನಾನೂ ಕಲಿತೆ...
ಎಲ್ಲರೂ ಕಲಿತರು..
ಕ್ಷಯವಾಗದ್ದು ಅಕ್ಷರವೆಂದರು...

3 comments:

  1. ಚೆನ್ನಾಗಿದೆ ಗಂಗಾಧರ್ ಸರ್.. :) ಖಂಡಿತ ಕ್ಷಯವಾಗದ್ದು ಅಕ್ಷರದ ಪಾತ್ರೆ :)

    ReplyDelete
  2. ಭಾವ ತಲ್ಲೀನ ಕವಿತೆ. ಓದುತ್ತಿದ್ದಂತೆ ಮನಸ್ಸಿನಲ್ಲಿ ಆಲೋಚನೆಗಳ ಗೆದ್ದಲು ಹುತ್ತ ಕಟ್ಟತೊಡಗುತ್ತದೆ.ಕವಿತೆ ಕಟ್ಟುವ ಇಟ್ಟಿಗೆಗಳಾದ ಪದಗಳನ್ನು ಕುರಿತ ಈ ಭಾವ ಲಹರಿ ,ಸುಂದರವಾದ ನುಡಿ ಪಕ್ವತೆ.... ನಾನು ಆಸ್ವಾಧಿಸಿದೆ.....!

    ReplyDelete