Wednesday, September 14, 2011

ವಿಸ್ಫೋಟ

ಮತ್ತದೇ ಸದ್ದು

ಘಟಸ್ಪೋಟದ ನಂತರ
ಸ್ಮಶಾನ ಮೌನ....


ನಲುಗಿದ್ದು ಜೀವಗಳು
ಅಳಿದುಳಿದ ಅವಶೇಷಗಳು ಹೇಳಲಾರವು
ಕೈ-ಕಾಲು ರುಂಡಗಳ ಜಾತಿ-ಮತ ಧರ್ಮವನು...


ವಿಚ್ಛಿದ್ರಗೊಂಡ ದೇಹಗಳೆದುರು
ಇವನಾರವ ಇವನಾರವ ಎಂಬದೊಂದೇ ಗೋಳು
ಚಿರಶಾಂತಿಯಲಿ ಮಲಗಿದವರೆಲ್ಲ ನಮ್ಮವರು...


ಕಂಪಿಸುವ ಮನಗಳಿಗೆಲ್ಲಿದೆ ಶಾಂತಿ
ಕಂಬನಿಯು ಕಪೋಲದ ಮೇಲೆ ಒಣಗಿಹೋಗಿದೆ
ಹೃದಯವಿದ್ರಾವಕವಾಗಿ ಶಾಂತಿಯೂ ರೋದಿಸುತ್ತಿದೆ....


ಬಂದವರು ಕೊಂದಿದ್ದು ನಮ್ಮನ್ನಲ್ಲ
ನಮ್ಮೊಳಗಿನ ಸಹಬಾಳ್ವೆಯ ನಂಬಿಕೆಯನ್ನು
ಬೇಡ ನಮಗಿಂತಹ ಸದ್ದು...


ಬೇಡ ನಮಗಿಂತಹ ಸದ್ದು
ಕಾಲವಾದವರೂ ಕಂಪಿಸುತಿಹರು
ಶಾಂತಿ, ಶಾಂತಿ ಶಾಂತಿಃ.....

1 comment:

  1. ಈ ಕವನ ಭಾರತದಲ್ಲಿ ಆಗಾಗ ಪ್ರಸ್ತುತವಾಗುತ್ತಿರುವುದಂತೂ ಸತ್ಯ. ಸುಳ್ಳಾಗಲಿ ಮುಂದೆ .

    ReplyDelete