Thursday, February 24, 2011

ಪ್ರೀತಿ

ಎನ್ನ ಮನದಾಳದಿ

ಪ್ರೇಮ ಬೀಜವನೆರಚಿ
ಮರೆಯಾಗಿ ಹೋದೆ ನೀನು
ಮೊಳಕೆಯೊಡೆಯುತಿದೆ ಪ್ರೀತಿ
ಅಂತರಂಗವ ಚಾಚಿ...
ಮತ್ತೆ ಮೂಡಿದೆ ಮೂಡಣದಿ
ಪ್ರೇಮ ರಶ್ಮಿಯ ರಂಗು
ಬಾನಿನ ಅಗಲಕೆ ತೆರೆದಿದೆ
ಎನ್ನ ಹೃದಯಾ
ಮನವು ಬಯಸುತಿದೆ
ರಂಗುರಂಗಿನ ಕಾಮನಬಿಲ್ಲು
ಹೃದಯ ಬಡಿತವು ಹಾಡಿದೆ
ಪ್ರೇಮಗೀತೆಯನು ಇಂದು
ಬಾ ಗೆಳತಿ ಬೇಗ
ಒಂದಾಗು ಎನ್ನ ಸ್ವರದೀ......


ನಿನ್ನ ಹನಿ ಪ್ರೀತಿ...
ಮುತ್ತಾಗಿ ಅರಳಿದೆ
ಎನ್ನ ಎದೆ ಚಿಪ್ಪಿನೊಳಗೆ
ಎದೆ ಬಡಿತದೊಡಗೂಡಿ
ಪ್ರೇಮ ರಾಗವ ಹಾಡಿ
ತಂತುಗಳ ಮೀಟುತಿದೆ
ಪ್ರೇಮ ರಾಗವ ಹಾಡುತಿದೆ
ಗೆಳತೀ......

4 comments:

  1. ಆಹಾ..!! ಭಾರಿ ಸುಂದರ ಈ ಪ್ರೇಮ ಕವನ..
    ಓದಿದ ತಕ್ಷಣ ಹಂಚಿಕೊಳ್ಳಲು ಹಾಡಿದ ಮನ
    ಇಲ್ಲುಂಟು ಸುಂದರ ಸಾಲುಗಳ ಸಮ್ಮಿಲನ
    "ಪ್ರೀತಿ" ಓದಿದ ಕ್ಷಣ ಮನಸ್ಸಲ್ಲಿ ಏನೋ ಸಂಚಲನ .. :)

    ReplyDelete
  2. ತುಂಬ ಸುಂದರ ಓದಿದರೆ ಪ್ರೀತಿ ಓಡಿ ಬರುವ ಹಾಗಿದೆ...

    ReplyDelete
  3. ಸುಂದರ ಕವನ...:-)

    ReplyDelete