Tuesday, December 14, 2010

ಹೊಸತು !!!

ಅನುದಿನವೂ ಮೂಡಣದಿ
ಅದೇ ಸೂರ್ಯ
ನಡೆದಾಡಲು ನಮಗೆ
ಅದೇ ಭೂಮಿ

ಹೊಸತನ್ನು ಹುಡುಕುವ
ಹುಮ್ಮಸ್ಸು, ಹಂಬಲ ಅಪಾರ
ಮನಸು ತೆರೆದುಕೊಳ್ಳುವುದಿಲ್ಲ
ಬೆಳಕಿನೆಡೆಗೆ

ಹೀಗಾಗಬಾರದಿತ್ತು
ಅದನ್ನು ಹೀಗೆ ಮಾಡಿದ್ದರೆ
ಚೆನ್ನಾಗಿತ್ತು
ಮನದಲ್ಲಿ ನೂರು ಹಳಹಳಿ

ಇದೊಂದು ಸಲ ಹೀಗೆಯೇ
ಎಂದಿನಂತಿರಲಿ
ಹೊಸತನ್ನು ಮುಂದೆ ಮಾಡೋಣ
ಹಳತು ನಮ್ಮನ್ನು ಅಗಲದು

ಅಪ್ಪಿಕೊಂಡಿದ್ದೇವೆ ಹೆಮ್ಮೆಯಿಂದ
ನಮ್ಮ ಅವಗುಣಗಳನ್ನು
ಮನಸು ಒಪ್ಪುವುದಿಲ್ಲ
ಹೊಸತಿನ ಸ್ನೇಹ, ವಯ್ಯಾರವನ್ನು

ನಾಳೆಯೆಂಬ ಅಭಯ
ಬೆನ್ನ ಹಿಂದಿರುವಾಗ
ಇಂದಿನ ಹೆಜ್ಜೆ
ಹೊಸತಿನೊಂದಿಗೆ ಸಾಗುವುದೇ ಇಲ್ಲ

No comments:

Post a Comment