ಮೌನಧಾರಿಣಿಯಾಗು
ಪ್ರೇಮವೊಂದೇ ಬಾಳಿನುಸಿರು
ಎಂದ ನಮ್ಮ ಮೊದಲ
ಭೇಟಿಯನೊಮ್ಮೆ ನೆನಪಿಸಿಕೋಮುಖವೆಲ್ಲ ಕೆಂಪಾಗಿ
ಕಂಪಿಸುತ್ತಿರುವ
ನನ್ನ ಕೈಕಾಲುಗಳು
ಮರಳಧಾರೆಯಲಿ
ಏನೇನೋ ಬರೆಯುತ್ತಿರುವ
ನಿನ್ನ ಆ ಕಾಲ್ಬೆರಳುಗಳು
ಏನು ಹೇಳಲೂ
ತಿಳಿಯದೇ ತಡವರಿಸಿದ
ಆ ಮಧುರ ಕ್ಷಣಗಳು
ನಿನ್ನ ಕಣ್ಣಿನಾಳದಲ್ಲಿ
ಜಗವನ್ನೇ ಕಾಣುವ
ನನ್ನ ಕನಸುಗಳು
ನನ್ನ ಹೃದಯದಾಳಲಿ
ಮನೆಕಟ್ಟಿ ನೆಲೆಸುವ
ನಿನ್ನ ಕನಸುಗಳು
ಮನದಾಳದಲಿ
ಮತ್ತೆ ಮೊಳಕೆಯೊಡೆಯಲಿ
ಆ ನಮ್ಮ ಮೊದಲ ಪ್ರೇಮ
ನಿತ್ಯನೂತನವಾಗಲೀ
ನಮ್ಮ ಪ್ರೇಮಧಾರೆ
ಮಾತಾಡಬೇಡ ಗೆಳತಿ.....
No comments:
Post a Comment