Saturday, April 7, 2012

ಸಖೀಗೀತ

ಸಖೀ....
ಕಣ್ಣ ಮುಂದೆ
ನೀನು ಕುಳಿತಿದ್ದರೂ
ಏನೋ ಕಳೆದುಕೊಂಡ ಭಾವ

ನೂರು ಮಾತುಗಳ
ಹೇಳುತಲಿದ್ದರೂ
ಮನದಲ್ಲಿ ಏನೋ
ಉಳಿದಿರುವ ಭಾವ

ನಿನ್ನ ಚಂಚಲ
ನಯನದಲಿ ತೂರಿ
ಹೃದಯದಾಳಕ್ಕಿಳಿದು
ಇರುವದೆಲ್ಲವನೂ ಹೇಳುವಾ ಬಯಕೆ

ಏನು ಕೊರತೆ
ಆವ ಬಯಕೆ ಅರಿಯಲಾರೆ ನಾ
ಲೀನವಾಗಬೇಕು ನಿನ್ನೊಳಗೆ
ನಾ ಕಳೆದು ಹೋಗಬೇಕು

ಮನದಲೇನೋ ಕಳವಳ
ಮಾಯಾಮೃಗದಂತೆ ಕಳೆದು
ಹೋದೀಯಾ ನೀನು ಎಂಬ ಭಾವ
ಬಾರೇ ಗೆಳತಿ, ಬಾರೇ
ಸೇರಿಕೋ ನೀ ಎನ್ನೆದೆಯ ಗೂಡ.......

1 comment:

  1. ಸಖೀಗೀತ ಸುಖೀಗೀತ :) ಚೆನ್ನಾಗಿದೆ ಘಂಘಣ್ಣ :)

    ReplyDelete