ಸಖೀ.....
ಮತ್ತೊಂದು ಸಂಜೆ
ಪಡುವಣದಿ
ದಾಪುಗಾಲು ಇಡುತ್ತಿರುವ
ಭಾಸ್ಕರ
ದೂರದಿಗಂತದಾಚೆ
ಶರಧಿ ಭೂಮಿಯ ಸಂಗಮದಿ
ಮಿಲನದ ಕಲರವ
ರವಿತೇಜನ ರಭಸಕೆ
ಅಲೆಗಳ ನಲಿದಾಟ
ಭುಗಿಲೆದ್ದ ನೆನಪುಗಳು
ಎದೆಯಾಳದಿಂದ ಹೊಮ್ಮಿ
ನೀಲಾಕಾಶದಿ ಚಿಮ್ಮಿ
ಇರುಳಿನಲಿ ಬೆಳಗುವುದು
ತಾರೆಗಳ ರಂಗೋಲಿ
ನಿನ್ನ ಒಡನಾಟದ ಪ್ರತಿಕ್ಷಣ
ಅಚ್ಚೊತ್ತಿದೆ ಎನ್ನ ಅಂತರಂಗದಲಿ
ಹಿತವಾದ ನೋವು
ಹೃದಯದಲಿ ಬಾಧಿಸಿದೆ
ನೀನಿಲ್ಲವೆಂಬುದು ನೆಪಮಾತ್ರವಾಗಿ
ಅನುಕ್ಷಣವೂ ನಲಿಯುವೆ
ಮನದಾಳದಲ್ಲಿ.... :)
ಮತ್ತೊಂದು ಸಂಜೆ
ಪಡುವಣದಿ
ದಾಪುಗಾಲು ಇಡುತ್ತಿರುವ
ಭಾಸ್ಕರ
ದೂರದಿಗಂತದಾಚೆ
ಶರಧಿ ಭೂಮಿಯ ಸಂಗಮದಿ
ಮಿಲನದ ಕಲರವ
ರವಿತೇಜನ ರಭಸಕೆ
ಅಲೆಗಳ ನಲಿದಾಟ
ಭುಗಿಲೆದ್ದ ನೆನಪುಗಳು
ಎದೆಯಾಳದಿಂದ ಹೊಮ್ಮಿ
ನೀಲಾಕಾಶದಿ ಚಿಮ್ಮಿ
ಇರುಳಿನಲಿ ಬೆಳಗುವುದು
ತಾರೆಗಳ ರಂಗೋಲಿ
ನಿನ್ನ ಒಡನಾಟದ ಪ್ರತಿಕ್ಷಣ
ಅಚ್ಚೊತ್ತಿದೆ ಎನ್ನ ಅಂತರಂಗದಲಿ
ಹಿತವಾದ ನೋವು
ಹೃದಯದಲಿ ಬಾಧಿಸಿದೆ
ನೀನಿಲ್ಲವೆಂಬುದು ನೆಪಮಾತ್ರವಾಗಿ
ಅನುಕ್ಷಣವೂ ನಲಿಯುವೆ
ಮನದಾಳದಲ್ಲಿ.... :)
`ಮತ್ತದೇ ಸ೦ಜೆ........' ಕವನ ಸು೦ದರವಾಗಿದೆ, ಅಭಿನ೦ದನೆಗಳು. ನನ್ನ ಬ್ಲಾಗ್ ಗೆ ಭೇಟಿಕೊಡಿ.
ReplyDelete