ನನ್ನೆದೆಯ ಆಳದಲಿ ಹಲವಾರು ವಿಚಾರಗಳು, ಕತೆಗಳು, ಕವಿತೆಗಳು ನೂರೆಂಟು ಮಾತುಗಳು ತಳಮಳವನ್ನು ಹೊಮ್ಮಿಸುತ್ತವೆ. ಆದರೆ ಏಕೋ ಏನೋ ಬರೆಯಲು ಹೊರಟರೆ ಎಲ್ಲವೂ ಕಲಸು ಮೇಲೋಗರ. ಮಿಶ್ರಣಗೊಂಡಿರುವ ವಿಷಯಗಳನ್ನು ಕಲಬೆರಕೆಯಾಗದಂತೆ ಬೇರ್ಪಡಿಸಿ ವಿಷದವಾಗಿ ವಿವರಿಸಲು ಲೇಖನಿಯಲ್ಲಿ ಹರಿಸಲು (ಇಲ್ಲಿ ಹಾಗೆ ಬರೆಯುವುದು ಅಪ್ರಸ್ತುತ) ಅಥವಾ ಬ್ಲಾಗಿಸಲು (ಎಲ್ಲರೊಡನೆ ಹಂಚಿಕೊಳ್ಳಲು) ಬಹುಶಃ ನನಗೆ ವೃತ್ತಿಪರತೆ ಇಲ್ಲವೇನೋ ???
ಮಧ್ಯರಾತ್ರಿಯಲಿ,
ದೂರದಲ್ಲೆಲ್ಲೋ ಸಿಂಕಿನಲ್ಲಿ ಸೋರುತಿರುವ
ನಲ್ಲಿಯ ನೀರಿನ ಟಪ್ ಟಪ್ ಸದ್ದು,
ಮನದಲ್ಲಿ ತಳಮಳವನ್ನುಂಟುಮಾಡುತ್ತದೆ.
ಅಂತರಂಗದಲಿ ವಿಚಾರಗಳ ಮಂಥನ
ಅಮೃತ ದೊರೆಯುವುದೇ ..... ???
ಆದರೂ ಸಹ ಬರೆಯಲೇ ಬೇಕು ಎನ್ನುವ ಹಂಬಲ ನಿರಂತರವಾಗಿ ಮನದಲ್ಲಿ ಆಗಾಗ ಮೂಡಿ ಮರೆಯಾಗುತ್ತದೆ.
ಅದರಂತೆ ನಾನು ಸಹ ನಾಲ್ಕು ಸಾಲುಗಳನ್ನು ಯಾರಾದರೂ ನೋಡಿ, ಓದಿ ಮೆಚ್ಚಲಿ ಎಂದಲ್ಲ !!! ಆದರೆ ನನ್ನ ಮನದೊಳಗಿನ ಕಿಚ್ಚನ್ನು ಹೊರಹಾಕುವ ಏಕಮೇವ ಉದ್ದೇಶದಿಂದ ಬರೆದಿದ್ದೇನೆ, ಇದು ಜಂಭದ ಮಾತು ಎಂದು ಓದುಗರು ಪರಿಗಣಿಸಬಾರದು, ಕನ್ನಡಿಯೊಳಗಿನ ಸತ್ಯವನ್ನು ನಿರುಕಿಸಲು ಇನ್ನೊಬ್ಬರ ಪ್ರಮಾಣ ಅವಶ್ಯಕವಿಲ್ಲ ಎಂಬುದು ನನ್ನ ಭಾವನೆ. ಆದರೆ ನನ್ನೊಳಗಿನ ಲೋಪದೋಷಗಳನ್ನು ತಿಳಿಸಿದರೆ ಪ್ರಾಯಶಃ ಅವುಗಳನ್ನು ಮೀರಿ ನನ್ನ ಪ್ರತಿಬಿಂಬವನ್ನು ಸುಧಾರಿಸಿಕೊಳ್ಳುವ ಪ್ರಯತ್ನವನ್ನು ನಾನು ಮಾಡಬಲ್ಲೆ ಎಂಬುದು ಒಂದು ಸಾಧ್ಯತೆ.
ನನ್ನೊಳಗಿನ .. .. .. ಅಂತರಾಳ
ನನ್ನೊಳಗಿನ ನಾನು
ನನ್ನನ್ನೂ ಮೀರಿ ಬೆಳೆಯುತ್ತದೆ
ಮೇರು ಪರ್ವತದ ತೆರದಿ
ಮದವೇರಿದ ಮದ್ದಾನೆಯಂತೆ
ಜಗವೆಲ್ಲವನು ಧಿಕ್ಕರಿಸಿ
ಮೆಲ್ಲಗೆ ಮತ್ತೇರಿಸಿ
ಉಸಿರುತ್ತದೆ "ಅಹಂ ಬ್ರಹ್ಮಾಸ್ಮಿ" ಎಂದು
ನನ್ನೊಳಗಿನ ನಾನು
ಮೋಹಪರವಶವಾಗಿ
ನಾನು, ನನ್ನದು, ನನ್ನಿಂದಲೇ
ಎಂಬ ಆತ್ಮರತಿಯಲಿ
ಹೊಸಕಿಹಾಕುತ್ತದೆ ನನ್ನತನವನು
ನನ್ನೊಳಗಿನ ನಾನು
ಕಾಮಪೀಪಾಸುವಾಗುತ್ತದೆ
ಆತ್ಮಶುದ್ಧಿಯ ಮರೆತುಭೌತಿಕ ಬಾಹ್ಯ ಶರೀರದ ಬಯಕೆಗಳ
ತೀಟೆ ತೀರಿಸಲು
ಕಾಮಾಂಧನನ್ನಾಗಿಸುತ್ತದೆ.
ಕೈ-ಬಾಯಿ ಕಣ್ಸನ್ನೆಗಳಲ್ಲಿಯೂ ಕಾಮನೆಗಳ ಕೆರಳಿಸಿ"
"ಕಾಮಾತುರಣಾಂ ನ ಲಜ್ಜಾಂ ನ ಭಯಂ"ಎಂಬಂತೆ
ಕಾಲದೇಶವನ್ನು ಮೀರಿ
ಬದುಕನ್ನು ಬೆತ್ತಲಾಗಿಸಿ ಬಯಲುಗೊಳಿಸುತ್ತದೆ
ನನ್ನೊಳಗಿನ ನಾನು
ಅಪರಿಮಿತ ಬಾಳ ಬಯಕೆಗಳ ತೀರಿಸಲು
ಬಾಧೆಗಳ ಬಗೆಹರಿಸಲು ಕ್ರೋಧದಿಂ ಅಬ್ಬರಿಸುತ್ತದೆ
ಪರಶಿವನ ಮೂರನೇ ಕಣ್ಣಿಗಿಂತಲೂ ತೀಕ್ಷ್ಣವಾದ
ಕ್ರೋಧ ಜ್ವಾಲೆಗಳನ್ನು ಪಸರಿಸಿ
ನನ್ನತನವನು ಜ್ವಲಿಸಿ ಬೂದಿಯಾಗಿಸುತ್ತದೆ
ನನ್ನೊಳಗಿನ ನಾನು
ಆಸೆಗಳ ಸುಳಿಯಲ್ಲಿ ಸಿಲುಕಿ
ಮಾನವೀಯತೆಯ ಮರೆತು
ಲೋಭದಿಂ ಫೂತ್ಕರಿಸುತ್ತದೆ
ನಶ್ವರದ ಹೆಣ್ಣು, ಹೊನ್ನು ಮತ್ತು ಮಣ್ಣಿಗಾಗಿ
ಹಂಬಲಿಸುತ್ತದೆ ಹಗಲಿರುಳು
ನನ್ನೊಳಗಿನ ನಾನು
ಅವರಿವರ ಏಳ್ಗೆಯನು ಕಂಡು ಕರುಬುತ್ತದೆ
ಮತ್ಸರದ ಬೆಂಕಿಯಲಿ ಕುಸಿಯುತ್ತದೆ
ಆತ್ಮವಂಚನೆಗೈಯುತ್ತದೆ
ಅಸೂಯೆಗೊಂಡು ಹಗಲಿರುಳು
ನನ್ನೊಳಗಿನ ನಾನು
ನಾನು ಯಾರು ? ನಾನು ಎಂದರೇನು ? ? ?
ನನ್ನೊಳಗಿನ ಮನಸೇ, ಕಾಮನೆಗಳೇ
ಅಥವಾ ನಶ್ವರವಾದ ಈ ಭೌತಿಕ ಶರೀರವೇ ?
ನನ್ನ ಅಂತರಾಳದಿ ಬೇರೂರಿರುವ ಅರಿಷಡ್ವರ್ಗಗಳ
ಮೀರಿ ನಿಂತಾಗಲೇ ಅರಿವಾಗುವುದು ನನ್ನೊಳಗೆ ಇರುವ ನನ್ನತನದ ಸಾರ-ಸತ್ವ

No comments:
Post a Comment